image

Dhyeya

ಸ್ವಶಕ್ತ ಭಾರತ.. ಸದೃಢ ಭಾರತ... ಸಮೃದ್ಧ ಭಾರತ

  1. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನಮ್ಮ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ದುಡಿಯುತ್ತೇನೆ.
  2. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನನ್ನ ತಾಯ್ನಾಡಿನಲ್ಲಿ ತಯಾರಿಸಲ್ಪಟ್ಟ ವಸ್ತುಗಳನ್ನೇ ನನ್ನ ದೈನಂದಿನ ಜೀವನದಲ್ಲಿ ಉಪಯೋಗಿಸುತ್ತೇನೆ.
  3. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ದೇಶದಲ್ಲಿ ತಯಾರಿಸಲ್ಪಟ್ಟ ವಸ್ತುಗಳ ಉಪಯೋಗದಿಂದ ದೇಶ ಆರ್ಥಿಕವಾಗಿ ಸದೃಢಗೊಳಿಸುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುತ್ತೇನೆ.
  4. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ದೇಶದ ಗುಡಿ ಹಾಗು ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ದೃಢಪಡಿಸಲು ನಾನು ಕಾರಣನಾಗುತ್ತೇನೆ.
  5. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನನ್ನ ಸಹ ನಾಗರಿಕರಿಗೆ ನಮ್ಮ ಶಕ್ತಿ ಸಾಮರ್ಥ್ಯ ಹಾಗು ಕುಶಲ ಕ್ರಿಯೆಗಳ ಬಗ್ಗೆ ವಿಶ್ವಾಸ ಮೂಡಿಸುತ್ತೇನೆ.
  6. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನನ್ನ ತಾಯ್ನಾಡನ್ನು, ಪ್ರಪಂಚದ ಅತ್ಯುನ್ನತ ಆರ್ಥಿಕ ಸ್ಥಿತಿಗೆ ಕೊಂಡೊಯ್ಯಲು ಕಟಿಬದ್ಧನಾಗಿರುತ್ತೇನೆ.
  7. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನಮ್ಮ ದೇಶದಲ್ಲಿ ವಿದೇಶಿ ಅಥವಾ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ತಯಾರಾದಂತಹ ವಸ್ತುಗಳ ಮಾರಾಟವನ್ನು ವಿರೋಧಿಸುತ್ತೇನೆ.
  8. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನಮ್ಮ ದೇಶದ ಹೆಚ್ಚಿನ ಜನರನ್ನು ಸ್ವಾವಲಂಭಿ ಬದುಕಿನೆಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತೇನೆ.
  9. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನನ್ನ ದೇಶದ ಹಿರಿಮೆ ಮತ್ತು ಕರಕೌಶಲ್ಯಗಳನ್ನು ಗಟ್ಟಿಪಡಿಸಲು ಶಕ್ತಿಮೀರಿ ದುಡಿಯುತ್ತೇನೆ.
  10. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನನ್ನ ದೇಶವನ್ನು ನೂರಕ್ಕೆ ನೂರು ಉದ್ಯೋಗಶೀಲ ರಾಷ್ಟ್ರವನ್ನಾಗಿಸುತ್ತೇನೆ.
  11. ಜವಾಬ್ದಾರಿಯುತ ಭಾರತೀಯ ಪ್ರಜೆಯಾದ ನಾನು, ನಮ್ಮ ದೇಶದ ಕಲೆ ಹಾಗು ಕಾಲವಸ್ತುಗಳನ್ನು ಪ್ರಪಂಚದ ಮಾರುಕಟ್ಟೆಗೆ ಕೊಂಡೊಯ್ಯಲು ಶ್ರಮಿಸುತ್ತೇನೆ.

ಅಂದು ತಾಯಿಯ ಅಪೇಕ್ಷೆ ನಮ್ಮೊಳಗಿನ ಸ್ವಾತಂತ್ಯದ ಕಿಚ್ಚು,
ಇಂದು ಸ್ವಾಭಿಮಾನದ ಜ್ವಾಲೆ ..!!!
ಬನ್ನಿ ಗ್ರಾಮೋದ್ಧಾರ ಕೇಂದ್ರಗಳ ಮುಖಾಂತರ ಸ್ವಾವಲಂಭಿಗಳಾಗೋಣ..!!!
ದೇಶದ ಕರಕುಶಲ ಕೌಶಲ್ಯಗಳನ್ನು ಪ್ರೋತ್ಸಹಿಸಿ ತಾಯಿಯ ಚಾರಣ ಕಮಲಗಳಿಗೆ ಸಮರ್ಪಿಸೋಣ.
ಸ್ವಾವಲಂಭನೆಯ ಬದುಕಿಗೆ ಜಯವಾಗಲಿ!!
ಆರ್ಥಿಕ ಸ್ವಾತಂತ್ಯ ನಮ್ಮ ಗುರಿ!
ಅದರೆಡೆಗೆ ನಮ್ಮ ಪಯಣ...
ಒಂದೇ ಮಾತರಂ..!!
ಜೈ ಮಾ ಭಾರತಿ...!!!

yono rummy